ಶ್ರೀ ಕ್ಷೇತ್ರ ಮುಂಡ್ಕೂರು

ಮುಂಡಾಸುರನನ್ನು ಶ್ರೀ ದುರ್ಗಾಪರಮೇಶ್ವರೀ ಸಂಹರಿಸಿದ ಪುಣ್ಯ ಕ್ಷೇತ್ರ ಮುಂಡಕೂರು ಎಂದು ಪ್ರಸಿದ್ದಿ ಪಡೆಯಿತು. ಸ್ಥಳ ಪ್ರರಾಣ ಅರಿತ ಭಾರ್ಗವ ಋಷಿಗಳು ಸುರದ ರಾಜನಿಂದ ಈ ಪುಣ್ಯ ಸ್ಥಳದಲ್ಲಿ ಮಹಿಷಮರ್ದಿನಿ ದೇವಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಕಾಲಕ್ರಮೇಣ ಜೈನವಂಶದ ವೀರವರ್ಮ ಎಂಬ ರಾಜನ ಆಳ್ವಿಕೆಯ ಸಂದರ್ಭದಲ್ಲಿ ಮಂಜಪ್ಪ ಅಜ್ರ ಎಂಬ ದುಷ್ಟ ಮಂತ್ರಿಯ ದುರುಪದೇಶದಿಂದ ರಾಜ್ಯಾದ್ಯಂತ ಅನ್ಯಾಯ, ಅಕ್ರಮ, ಅರಾಜಕತೆಗಳು ತಾಂಡವವಾಡತೊಡಗಿದವು ಶಾಂಭವಿ ನದಿಯ ಪಶ್ಚಿಮದಲ್ಲಿರುವ ಉಳೆಪಾಡಿ ಗ್ರಾಮದ ಗುಡ್ಡೆಸಾನ ಎಂಬಲ್ಲಿ ದೈವಾಂಶ ಸಂಭೂತರಾದ ಕಾಂತಾಬಾರೆ, ಬೂದಾಬಾರ ಎಂಬ ವೀರ ಸಹೋದರರಿದ್ದರು. ಪ್ರತಿನಿತ್ಯ ಅವರು ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸುವುದು ನಿತ್ಯಚರ್ಯ ಇಟ್ಟುಕೊಂಡಿದ್ದರು. ವೀರವರ್ಮರಾಜನಿಗೆ ಇವರು ನಿತ್ಯದ ಕಾರ್ಯಕ್ರಮವನ್ನು ಆತನ ಸಹಚರನಾಗಿದ್ದ ಶಿವಪ್ಪ, ಸಿದ್ದಪ್ಪ ಮುಂಗ್ಲಿ ಎಂಬ ಸಹೋದರರು ತಿಳಿಸಿದಾಗ ನೆರೆಯ ಸಂಧರ್ಭದಲ್ಲಿ ದೋಣಿಯವನಿಗೆ ಬಾರೆ ಸಹೋದರರನ್ನು ಶಾಂಭವಿ ನದಿ ದಾಟಿಸಬಾರದೆಂದು ಕಟ್ಟಪ್ಪಣೆ ಮಾಡಿದನಂತೆ. ನದಿ ದಡದಲ್ಲಿ ಶ್ರೀ ದೇವಿಯನ್ನು ಮನಸಾರ ಧ್ಯಾನಿಸಲು ನದಿಯು ಇಬ್ಬಾಗವಾಗಿ ಬಾರೆಯವರಿಗೆ ಮುಂಡೂರಿಗೆ ಬರಲು ದಾರಿ ಮಾಡಿ ಕೊಟ್ಟಿತ್ತಂತೆ. ಇದನ್ನರಿತ ವೀರವರ್ಮನು ಸ್ಥಳೀಯ ಅರ್ಚಕರು, ತಂತ್ರಿಗಳೂ ಒಪ್ಪದಿದ್ದಾಗ ಕೇರಳದಿಂದ ಮಾಂತ್ರಿಕನನ್ನು ಬರಮಾಡಿಸಿ, ಶ್ರೀ ದೇವಿಯ ಸನ್ನಿಧಾನವನ್ನು ಕುಗ್ಗಿಸಿ, ಕ್ಷೇತ್ರ ರಕ್ಷಕರಾಗಿದ್ದ ಧೂಮಾವತಿ, ರಕೇಶ್ವರಿ ದೈವಗಳನ್ನು ಸ್ತಂಭನಗೊಳಿಸಿ ಪಶ್ಚಿಮಾಭಿಮುಖವಾಗಿದ್ದ ಶ್ರೀ ದೇವಿಯ ಮೂಲಬಿಂಬವನ್ನು ಪೂರ್ವಾಭಿಮುಖವಾಗಿ ತಿರುಗಿಸಿ ಬಂಬದ ಅಡಿಯಲ್ಲಿದ್ದ ಮುತ್ತು ರತ್ನಾದಿ ಅಮೂಲ್ಯ ಆಭರಣಗಳನ್ನು ದೋಚಿದನಂತೆ. ಐಲಿಕ ಬಾರೆ ಸಹೋದರರಿಗೆ ಕಬ್ಬಿನ ಕಟ್ಟೋಂದನ್ನು ಒಂದೇ ಏಟಿಗೆ ಖಡ್ಗದಿಂದ ತುಂಡರಿಸುವ ಪಂಥಾಸ್ಥಾನ ನೀಡಿ ಇದರಲ್ಲಿ ಗೆದ್ದರೆ ಒಬ್ಬನ್‌ರೋಟ ಎಂಬ ಫಲಭರಿತ ತೆಂಗಿನ ತೋಟವನ್ನು ಪಣವಾಗಿ ನೀಡುವುದಾಗಿ ಘೋಷಿಸಿದನು. ಅನನ್ಯಭಕ್ತರಾಗಿದ್ದ ಬಾರೆಯವರಿಗೆ ವೀರವರ್ಮನ ಕುಕೃತ್ಯ ಅರಿವಾಗಿ ಶ್ರೀ ದೇವಿಯನ್ನು ಪ್ರಾರ್ಥಿಸಲು ಕಲ್ಲಕಂಡ ಎಂಬ ಜಾಗದಲ್ಲಿ ಹರಿತವಾದ ಬಡ್ಗವೊಂದನ್ನು ಶ್ರೀದೇವಿ ಪ್ರಸಾದಿಸಿದಳಂತೆ. ಆ ಐಡ್ಗದಿಂದ ಕಬ್ಬಿನ ಕಟ್ಟನ್ನು ಒಂದೇ ಏಟಿಗೆ ತುಂಡರಿಸಲು. ಆದರೊಳಗಿದ್ದದ್ದ ಕಬ್ಬಿಣದ ಸರಳುಗಳೂ ತುಂಡಾಗಿ ಬಿದ್ದವಂತೆ, ಪಣದಂದೆ ತೋಟವನ್ನು ಕೊಡಲೊಪ್ಪದ ವೀರವರ್ಮ ಮಂಜಪ್ಪ ಅಜ್ರ, ಶಿವಪ್ಪ, ಸಿದ್ದಪ್ಪ ಮುಂಗ್ಲಿ ಹಾಗೂ ಇತರ ದುಷ್ಟರನ್ನು ಶ್ರೀದೇವಿ ಇತ್ತ ಬಡ್ಗದಿಂದಲೇ ಸಂಹರಿಸಿ ಆರಾಜಕತೆಗೆ ಅಂತಿಮ ಹಾಡಿ ಒಬ್ಬನ್ ತೋಟದಲ್ಲಿ ಕೈಯಿಂದಲೇ ಬಾವಿ ತೋಡಿ. ನೀರನ್ನು ಸ್ವೀಕರಿಸಿದರಂತೆ. ಆ ತೆಂಗಿನ ತೋಟದಿಂದ ಬರುವ ಎಣ್ಣೆಯನ್ನು ಶ್ರೀದೇವಿಯ ನಂದಾದೀಪಕ್ಕೆ ವಿನಿಯೋಗಿಸಲು ತಿಳಿಸಿ ಮೂಡಬಿದ್ರೆ ಚೌಟರಸರನ್ನು ಬರ ಮಾಡಿಸಿ ಇನ್ನಾ, ಮುಂಡೂರು, ಮುಲ್ಲಡ್ಕ ಗ್ರಾಮಗಳ ಮೇಲ್ವಿಚಾರಣೆ ಮಾಡಿಸುವಂತೆಯೂ ಶ್ರೀ ದುರ್ಗಾಪರಮೇಶ್ವರೀ ದೇವಳದ ನಿತ್ಯ ನೈಮಿತ್ತಿಕಾರಿಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿದರಂತೆ. ಅಂದಿನಿಂದ ಚೌಟರ ಸೀಮೆಗೆ ದೇವಳ ಸೇರಿ ಮೇಲ್ವಿಚಾರಣೆಗೆ ಅಷ್ಟಕುಲ ಬ್ರಾಹ್ಮಣರು, 8 ಗುತ್ತು, 4 ಬಾಂಕೆ, 4 ಪರಾರಿ ಹಾಗೂ ಇವರೆಲ್ಲರ ಮುಖ್ಯಸ್ಥರಾಗಿ ಮಡ್ಕಣ್ಯಾಯರನ್ನು ನೇಮಿಸಿದರಂತೆ, 2005 ರಲ್ಲಿ ಗರ್ಭಗುಡಿ ಬಿಚ್ಚುವ ಸಂದರ್ಭ ಪಶ್ಚಿಮಭಾಗದಲ್ಲಿ ಬಾಗಿಲಿದ್ದ ದ್ವಾರಗಳು ದೊರೆತಿದ್ದು, ಶ್ರೀ ದೇವಿಯು, ಪಶ್ಚಿಮಾಭಿಮುಖವಿದ್ದ ನೆನಪಿಗಾಗಿ ‘ಕುರುಹಿನ ಮಂಟಪ’ ವನ್ನು ಪಶ್ಚಿಮ ದಿಕ್ಕಿನಲ್ಲಿ ರಚಿಸಲಾಗಿದೆ. ಮುಂಡೂರು ಜೈನ ಪೇಟೆಯ ಪೈ ಕುಟುಂಬಿಕರು ಶ್ರೀ ದೇವಿಗೆ ಸಮರ್ಪಿಸಿದ್ದಾರೆ.

Navaratri Celebrations

The word Navratri is derived from a Sanskrit word that translates ‘Nava’ as nine and ‘Ratri’ as night. Each day is dedicated to one of the nine avatars of goddess Durga (namely Shailputri, Brahmacharini, Chandraghanta, Kushmanda, Skandamata, Katyayani, Kaalratri, Mahagauri and Siddhidatri) and every day has a colour significance associated with it. The festival symbolises the victory of good over evil. It is believed that goddess Durga fought with demon Mahishasur (who represents egoistism) for nine days and the final day, when the demon was beheaded by her, is called Vijay Dashmi.

ನವರಾತ್ರಿ ಆಚರಣೆಗಳು

Navaratri Photos

ನವದುರ್ಗೆಯರು

Latest News

Management Committee